ಶಾಕಿಂಗ್ ನ್ಯೂಸ್: ರಶ್ಮಿಕಾ - ರಕ್ಷಿತ್ ಬ್ರೇಕ್ ಅಪ್ : ಹೌದು ಎಂದ ಕುಟುಂಬ!


ಕಿರಿಕ್ ಪಾರ್ಟಿ ಸಿನಿಮಾದಿಂದ ರಿಯಲ್ ಲೈಫಲ್ಲೂ ಒಂದಾಗಿದ್ದ ರಶ್ಮಿಕಾ - ರಕ್ಷಿತ್ ಶೆಟ್ಟಿ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಬಲ್ಲ ಮೂಲಗಳಿಂದ ಖಚಿತವಾಗಿದೆ. ವೈಯಕ್ತಿಕ ವಿಚಾರವಾಗಿರುವುದರಿಂದ ದಯವಿಟ್ಟು ಈ ಬಗ್ಗೆ ಕೇಳಬೇಡಿ ಎಂದು ರಶ್ಮಿಕಾ ಕುಟುಂಬ ಹೇಳಿದೆ.

ರಶ್ಮಿಕಾ ಸದ್ಯ ಟಾಲಿವುಡ್ ಸಿನಿಮಾಗಳಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಗೀತ ಗೋವಿಂದಂ ಸಿನಿಮಾದಿಂದ ಶುರುವಾದ ಜರ್ನಿ ಇದೀಗ ಸಕ್ಸಸ್ ಫುಲ್ ಆಗಿ ಮುಂದುವರಿಯುತ್ತಿದೆ.

ಇದೀಗ ಇಬ್ಬರ ನಡುವೆ ಬ್ರೇಕಪ್ ನ್ಯೂಸ್ ನಿಜ ಎಂದು ಕುಟುಂಬದ ಆಪ್ತ ಮೂಲಗಳು ಹೇಳುತ್ತಿವೆ. ಇದು ತೀರ ಖಾಸಗಿ ವಿಚಾರವಾಗಿದ್ದು ನಮಗೆ ಪ್ರೈವೆಸಿ ಕೊಡಿ ಎಂದ ರಶ್ಮಿಕಾ ಕುಟುಂಬ ಮನವಿ ಮಾಡಿದೆ. ಆದರೆ ರಕ್ಷಿತ್ ಶೆಟ್ಟಿ ಕುಟುಂಬ ಮಾತ್ರ ಈಗಲು ಈ ಸುದ್ದಿ ಸುಳ್ಳೆನ್ನುತ್ತಿದ್ದಾರೆ.
ರಶ್ಮಿಕಾ ಸದ್ಯ ತೆಲುಗಿನ ನಾಗಾರ್ಜುನ ನಾನಿ ಜೊತೆ ತೆಲುಗಿನ ದೇವದಾಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೂನಿಯರ್ ಎನ್ ಟಿ ಆರ್ ಜೊತೆಗೂ ಸಿನಿಮಾದಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ಕನ್ನಡದಲ್ಲಿ ದರ್ಶನ್ ಜೊತೆ ಯಜಮಾನ ಸಿನಿಮಾದಲ್ಲಿಯೂ ಕೂಡ ರಶ್ಮಿಕಾ ನಟಿಸುತ್ತಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಮಂದಣ್ಣ ಸಿನಿಮಾಗಳ ಬಗ್ಗೆ ಹೆಚ್ಚು ಗಮನ ಹರಿಸಲು ನಿರ್ಧಾರ ಮಾಡಿದ್ದಾರೆ.

ರಕ್ಷಿತ್ ಮತ್ತು ರಶ್ಮಿಕಾ ಕುಟುಂಬದ ನಡುವೆ ಹೊಂದಾಣಿಕೆ ಸರಿಯಾಗದ ಕಾರಣ ನಿಶ್ಚಿತಾರ್ಥವನ್ನು ಇಲ್ಲಿಗೆ ಕೈಬಿಡುವ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ನಿಶ್ಚಿತಾರ್ಥವನ್ನು ಮುರಿದುಕೊಳ್ಳುವ ಬಗ್ಗೆ ಕಠಿಣ ನಿರ್ಧಾರ ಮಾಡುವ ಮುನ್ನ ಇಡೀ ಕುಟುಂಬದವರ ಜೊತೆ ಕೂತು ಮಾತುಕೆತನ್ನು ನಡೆಸಲಾಗಿದೆ.

Comments