ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ:, ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ:


ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ:,
ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ:

ಗುರುವನ್ನು ಸ್ತುತಿಸುವ ಆದಿಶಂಕರರಿಂದ ರಚಿತವಾದ ಈ ಶ್ಲೋಕ ಎಲ್ಲರಿಗೂ ಗೊತ್ತಿದೆ. ಗುರು ಎಂದರೆ ಬ್ರಹ್ಮ, ಗುರು ಎಂದರೆ ವಿಷ್ಣು, ಗುರುವೇ ಮಹೇಶ್ವರ, ಈ ಲೋಕದ ಸೃಷ್ಟಿ ಕರ್ತನೇ ಗುರು, ಆ ಮಹಾನ್ ಗುರುವಿಗೆ ನಮನ.

ಶಿಕ್ಷಣ ಎಂಬುದು ಒಬ್ಬ ಮನುಜನಿಗೆ ಗುರಿ, ಜ್ಞಾನವನ್ನು ನೀಡುತ್ತದೆ. ಗುರು' ಎಂಬ ಪದದಲ್ಲಿ 'ಗು' ಎಂದರೆ ನೆರಳು 'ರು' ಎಂದರೆ ಚದುರಿಸುವುದು ಎಂದರ್ಥ. ಯಾರು ಅಜ್ಞ್ನಾನ ಅಂಧಕಾರವನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿರುತ್ತಾರೋ ಅವರೇ ನಿಜವಾದ ಗುರು. ಅಂತಹ ಗುರು ಜಗತ್ತನ್ನು ಬೆಳಗಲು ನೆರವಾಗುತ್ತಾನೆ. 

ಶಿಕ್ಷಣವೆಂಬುದು ಪ್ರತಿಯೊಬ್ಬರಿಗು ಮುಖ್ಯವಾಗಿ ಬೇಕಾಗಿದೆ. ಶಿಕ್ಷಣದಲ್ಲಿ ಪ್ರತಿ ಶಿಕ್ಷಕನ ಪಾತ್ರ ಅತ್ಯಂತ ಮುಖ್ಯವಾಗಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ಯುನೆಸ್ಕೊ ಸೆಪ್ಟೆಂಬರ್ ೫ ನ್ನು ವಿಶ್ವ ಶಿಕ್ಷಕರ ದಿನಾಚರಣೆಯನ್ನಾಗಿ ಘೋಷಿಸಿದೆ. 

ಭಾರತದಲ್ಲಿ ಸೆಪ್ಟೆಂಬರ್ ೫, ೧೯೬೨ರಿಂದ ಶಿಕ್ಷಕರ ದಿನವನ್ನು ಆಚರಿಸುವ ಪದ್ಧತಿ ರೂಢಿಗೆ ಬಂದಿದೆ. ಭಾರತದಲ್ಲಿ ಮಾಜಿ ರಾಷ್ಟಪತಿ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

Comments