ಬಿಗ್ ಬ್ರೇಕಿಂಗ್ : ಕನ್ನಡಿಗರಿಗೆ ಕೊನೆಗೂ ನಿರಾಶೆ ಮಾಡದ ನರೇಂದ್ರ ಮೋದಿ ಸರ್ಕಾರ!!!!! ಕರುನಾಡಿಗೆ ಗುಡ್ ನ್ಯೂಸ್!!!!ಏನದು ಗೊತ್ತಾ???
ಬೆಂಗಳೂರಿನಿಂದ ಏರ್ ಶೋ ಸ್ಥಳಾಂತರವಾಗುವ ಕುರಿತು ಭಾರೀ ಚರ್ಚೆ ಕೆಲ ದಿವಸಗಳ ಹಿಂದೆ ನಡೆದಿತ್ತು. ಈ ನಡುವೆ ಏರ್ ಶೋ ಸ್ಥಳಾಂತರವಾಗುವುದಿಲ್ಲ ಬದಲಿಗೆ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸ್ಪಷ್ಟನೆ ನೀಡಿದೆ.
ಕಳೆದ 21 ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್ ಶೋ ಲಕ್ನೋಗೆ ಸ್ಥಳಾಂತರವಾಗುತ್ತಾ ಎನ್ನುವ ಗೊಂದಲಕ್ಕೆ ಉಂಟಾದ ವೇಳೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ದ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಇದಲ್ಲದೇ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಕೂಡಲೇ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನ ಮಂತ್ರಿ, ರಕ್ಷಣಾ ಸಚಿವರಿಗೆ ಪತ್ರ ಬರೆದು ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ನಡೆಸಲಾಗುತ್ತಿರುವ ಏರ್ ಶೋ ವನ್ನು ಬೇರೆ ಕಡೆಗೆ ಸ್ಥಳಾಂತರ ಮಾಡದಂತೆ ಪತ್ರ ಬರೆದು ಮನವಿ ಮಾಡಿ, ಒತ್ತಾಯಿಸಿದ್ದರು.
ಈ ನಡುವೆ ಕೊನೆಗೂ ಕೇಂದ್ರದ ಮೋದಿ ಹಾಗೂ ರಕ್ಷಣಾ ಇಲಾಖೆ ಏರ್ ಶೋವನ್ನು ಲಕ್ನೋಗೆ ಸ್ಥಳಾಂತರ ಮಾಡದೇ ಬೆಂಗಳೂರಿನಲ್ಲೇ ನಡೆಸಲು ತೀರ್ಮಾನ ಮಾಡಿದೆ ಎನ್ನಲಾಗಿದೆ. ಮುಖ್ಯಮಂತ್ರಿಗಳ ಪತ್ರ ಹಾಗೂ ಕನ್ನಡಿಗಾರ ಬೇಡಿಕೆಗೆ ಮೋದಿ ಅಸ್ತು ಎಂದಿದ್ದಾರೆ

Comments
Post a Comment