ಬಿಗ್ ಬ್ರೇಕಿಂಗ್: ರಾಹುಲ್‌ "ಮಾನಸ' ವಿವಾದ!!!!! ರಾಹುಲ್ "ಮಾನಸ ಸರೋವರದ" ಯಾತ್ರೆಯ ಸುತ್ತ ಅನುಮಾನದ ಹುತ್ತ!!!!!!

 ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರು ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಿರುವ ಬಗ್ಗೆ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಕಾಂಗ್ರೆಸ್‌, ಯಾತ್ರೆಯ ಕೆಲ ಫೋಟೋಗಳನ್ನು ಟ್ವಿಟರ್‌ನಲ್ಲಿ ಪ್ರಕಟಿಸಿರುವುದು ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಈ ಮಾನಸ ಯಾತ್ರೆಯ ಸತ್ಯಾಸತ್ಯತೆಯ ವಿಶ್ಲೇಷಣೆಗಳು ನಡೆಯುತ್ತಿವೆ.

ಕಾಂಗ್ರೆಸ್‌ ಹೇಳ್ಳೋದೇನು?
ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿದ ಫೋಟೋವೊಂದರಲ್ಲಿ ಕೈಲಾಸ ಪರ್ವತದ ತಪ್ಪಲಲ್ಲಿ ಸಹ ಯಾತ್ರಾರ್ಥಿಗಳ ಜತೆಗೆ ರಾಹುಲ್‌ ಕುಳಿತಿದ್ದಾರೆ. ಅವರ ಹಿಂದೆ ಹಿಮಚ್ಛಾದಿತ ಬೆಟ್ಟದ ತಪ್ಪಲು ಕಾಣಿಸುತ್ತದೆ. ಇದೇ ವೇಳೆ, ರಾಹುಲ್‌ ಅವರ ಫಿಟ್ ನೆಸ್ ಬಗ್ಗೆ ಟಿಪ್ಪಣಿಯನ್ನೂ ನೀಡಿರುವ ಕಾಂಗ್ರೆಸ್‌, ಕೈಲಾಸ ಪರ್ವತಾರೋಹಣದ ವೇಳೆ ರಾಹುಲ್‌, 463 ನಿಮಿಷಗಳಲ್ಲಿ 446,44,433 ಮೆಟ್ಟಿಲುಗಳನ್ನು ಏರಿ 4,466 ಕ್ಯಾಲೊರಿ ಕಳೆದುಕೊಂಡಿದ್ದಾರೆ ಎಂದಿದೆ.

ವಾಕಿಂಗ್‌ ಸ್ಟಿಕ್‌ ಮೇಲೆ ಅನುಮಾನ:

ಇಷ್ಟೆಲ್ಲಾ ಆದರೂ, ರಾಹುಲ್‌ ಅವರ ಒಂದು ಫೋಟೋದಲ್ಲಿ ವಾಕಿಂಗ್‌ ಸ್ಟಿಕ್‌ ಹಿಡಿದು ಯಾತ್ರಾರ್ಥಿ ಜತೆ ತೆಗೆಸಿಕೊಂಡಿರುವ ಫೋಟೋ ಅನುಮಾನಗಳಿಗೆ ಮೂಲ ಕಾರಣ. ಹಿಮಾಲಯದಲ್ಲಿ ಟ್ರೆಕ್ಕಿಂಗ್‌ ಮಾಡುವಾಗ ಇಂಥ ಸಾಮಾನ್ಯ ವಾಕಿಂಗ್‌ ಸ್ಟಿಕ್‌ ಬಳಸಲಾಗುತ್ತದೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ. ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹಾಗೂ ಇತರ ಬಿಜೆಪಿ ನಾಯಕರದ್ದೂ ಇದೇ ಪ್ರಶ್ನೆಯಾಗಿದ್ದು, ಇದು ನಕಲಿ ಫೋಟೋ ಎಂದು ಸಿಂಗ್‌ ಹೇಳಿದ್ದಾರೆ. ಇದು ರಾಹುಲ್‌ ಶಿವಭಕ್ತ ಎಂಬುದನ್ನು ಸಾಬೀತುಪಡಿಸಲು ಕಾಂಗ್ರೆಸ್‌ ಈ "ಹರ' ಸಾಹಸ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

Comments