ಬ್ರೇಕಿಂಗ್ ನ್ಯೂಸ್: ಕಾಂಗ್ರೆಸ್ ಅಧಿಕಾರಕ್ಕಾಗಿ ಮಾಡುತ್ತಿರುವ ಸರ್ಕಸ್ ನೋಡಿದರೆ ನಿಮಗೂ ನಗು ಬರುತ್ತೇ????ಸುದ್ದಿ ನೋಡಿ!!!!


ಹೇಳಿ ಕೇಳಿ ಇದು ಸೋಶಿಯಲ್ ಮೀಡಿಯಾ ಕಾಲ. ಸಾಮಾಜಿಕ ಮಾಧ್ಯಮಗಳಲ್ಲಿ active ಆಗಿದ್ರೆ ಅಷ್ಟರ ಮಟ್ಟಿಗೆ ವ್ಯಕ್ತಿ ಈ ಕಾಲಕ್ಕೆ ತಕ್ಕ ಹಾಗೆ ಅಪ್ಡೇಟ್ ಆಗಿದ್ದಾನೆ ಅಂತ ಅರ್ಥ. ಇಂತಹ ಸಾಮಾಜಿಕ ಮಾಧ್ಯಮಗಳನ್ನು ಚುನಾವಣೆಯ ಗೆಲುವಿನ ಏಣಿಯನ್ನಾಗಿ ಬಳಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.


ಇದೇ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಮುಖಂಡರು ತಮ್ಮ ಬೆಂಬಲಿಗರಿಗೆ, ಟಿಕೆಟ್ ಆಕಾಂಕ್ಷಿಗಳಿಗೆ ಹೊಸ ಟಾಸ್ಕ್ ನೀಡಿದ್ದಾರೆ. ಕಾಂಗ್ರೆಸ್ ಟಿಕೇಟ್ ಬೇಕು ಅಂದ್ರೆ ಅಂಥವರು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು active ಇರಲೇಬೇಕು! ಮಾತ್ರವಲ್ಲ, ಅವರ ಫೇಸ್ ಬುಕ್ ಪೇಜ್ ಗೆ ಕನಿಷ್ಠಪಕ್ಷ 15000 ಲೈಕ್ಸ್, ಟ್ವಿಟ್ಟರ್ ನಲ್ಲಿ 5000 ಫಾಲೋವರ್ಸ್ ಇರಲೇಬೇಕು! ಜೊತೆಗೆ ಕೆಲವು whats app ಗ್ರೂಪಿನಲ್ಲಿ ಸದಸ್ಯರಾಗಿರಬೇಕು!

ಮಧ್ಯಪ್ರದೇಶ ಕಾಂಗ್ರೆಸ್ ನ ಅಧಿಕೃತ ಸಾಮಾಜಿಕ ಮಾಧ್ಯಮದ ಪೇಜ್ ಗಳಲ್ಲಿ ಪೋಸ್ಟ್ ಮಾಡುವ ಯಾವುದೇ ಸ್ಟೇಟಸ್, ಪೋಸ್ಟ್ ಗಳನ್ನು ಶೇರ್ ಮಾಡಬೇಕು ಮತ್ತು ಅವುಗಳನ್ನು ಲೈಕ್, ರೀಟ್ವೀಟ್ ಮಾಡಬೇಕು ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಸೆಪ್ಟೆಂಬರ್ 15 ರ ಒಳಗೆ ಪಕ್ಷದ ಸದಸ್ಯರು(ಟಿಕೆಟ್ ಆಕಾಂಕ್ಷಿಗಳು), ಮುಖಂಡರು ತಮ್ಮ ಸೋಶಿಯಲ್ ಮೀಡಿಯಾ ವಿವರಗಳನ್ನು ನೀಡಬೇಕು. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ಸಾಮಾಜಿಕ ಮಾಧ್ಯಮವನ್ನು ಪ್ರಭಾವಶಾಲಿಯಾಗಿ ಬಳಸಿಕೊಳ್ಳಲು ನಿರ್ಧರಿಸಿದೆ.

ಒಟ್ಟಾರೆಯಾಗಿ ಬಿ.ಜಿ.ಪಿ ಪಕ್ಷದ ಸಮರ್ಥ ಆಡಳಿತ ಹಾಗೂ ಎಲ್ಲಾ ಸಾಮಾಜಿಕ ಮಾಧ್ಯಮಗಳ ಸರಿಯಾದ ಬಳಕೆಯನ್ನು ಕಂಡು ಕಾಂಗ್ರೆಸ್ ಅದನ್ನು ಶಾಸನದಂತೆ ರೂಪಿಸುತ್ತಿದೆ.


Comments