ಬ್ರೇಕಿಂಗ್ ನ್ಯೂಸ್: ಲೋಕಸಭಾ ಚುನಾವಣೆ : ಅಪ್ಪನ ವಿರುದ್ಧವೇ ಮಗಳು ಸ್ಪರ್ಧೆ..!!!!ಯಾರದು ಗೊತ್ತಾ..!!!!

ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್ ಅವರ ಕುಟುಂಬದಲ್ಲಿ ರಾಜಕೀಯ ಕಲಹ ಏರ್ಪಟ್ಟಿದೆ. ಹೌದು, ಹೀಗೊಂದು ಸುದ್ದಿ  ಕೇಳಿಬರುತ್ತಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಪಾಸ್ವಾನ್ ಹಾಗೂ ಪುತ್ರ ಚಿರಾಗ್ ಪಾಸ್ವಾನ್ ವಿರುದ್ಧ ಸ್ಪರ್ಧಿಸುವುದಾಗಿ ಪುತ್ರಿ ಆಶಾ ದೇವಿ ಹಾಗೂ ಅಳಿಯ ಅನಿಲ್ ಸಾಧು ಘೋಷಿಸಿದ್ದಾರೆ.
ಆಶಾ, ಪಾಸ್ವಾನ್‌ರ ಮೊದಲ ಹೆಂಡತಿ ರಾಜ್ ಕುಮಾರ್ ದೇವಿಯ ಮಗಳಾಗಿದ್ದಾರೆ. ಪಾಸ್ವಾನ್ 1981 ರಲ್ಲಿ ಆಕೆಗೆ ವಿಚ್ಛೇದನ ನೀಡಿ 1983ರಲ್ಲಿ ರೀನಾ ಎನ್ನುವವರನ್ನು ವಿವಾಹ ಆಗಿದ್ದರು. ಪಾಸ್ವಾನ್ ಸಮುದಾಯವನ್ನು ಪಾಸ್ವಾನ್ ವಂಚಿಸುತ್ತಿದ್ದು, ತಮ್ಮ ಸ್ವಂತ ಮಗಳನ್ನೇ ಕಡೆಗಣಿಸಿದ್ದಾರೆ ಎಂದು ಅನಿಲ್ ಸಾಧು ಆರೋಪಿಸಿದ್ದಾರೆ.

Comments